Blogbamba
msg placeholder Retry Now
msg placeholder
Publishing Comment () Sec
STOP
Edit Blog?
If you edit your live blog it will reset all the matrices.
Delete Blog?
This actions cannot be undone.
Edit Blog?
If you edit your live blog it will reset all the matrices.
Delete Blog?
This actions cannot be undone.
ಹೊಸ ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ.
ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು ❤️
mangala
2 min read

ಹೊಸ ವರ್ಷದ ಮೊದಲನೇ ಹಬ್ಬ ಮಕರ ಸಂಕ್ರಾಂತಿ

 ಸಂಕ್ರಾಂತಿ ಹಬ್ಬವನ್ನು ಪ್ರತಿ ವರ್ಷ ಜನವರಿ 14 ಮತ್ತು 15 ರಂದು ಆಚರಿಸಲಾಗುತ್ತದೆ. ಆದ್ದರಿಂದ ಸಂಕ್ರಾಂತಿ ವರ್ಷದ ಮೊದಲ ಹಬ್ಬವಾಗಿದೆ. ವರ್ಷದಲ್ಲಿ ಬರುವ ಮೊದಲ ಹಬ್ಬವನ್ನು ಜನರು ಹೆಚ್ಚು ಸಡಗರದಿಂದ ಮನೆಯಲ್ಲಿ ಸಿಹಿ ಮಾಡಿ, ಹೊಸ ಉಡುಪುಗಳನ್ನು ಕೊಂಡು ಆಚರಿಸುತ್ತಾರೆ. ಬೇರೆ ಎಲ್ಲ ಹಬ್ಬಗಳಿಗಿಂತ ಸಂಕ್ರಾಂತಿ ವಿಶೇಷ ಕಾರಣ ಸಂಕ್ರಾಂತಿ ಹಬ್ಬವನ್ನು ದನಗಳ ಹಬ್ಬವೆಂದು ಕರೆಯಲಾಗುತ್ತದೆ. ಏಕೆಂದರೆ ಸಂಕ್ರಾಂತಿ ಹಬ್ಬದಂದು ಮನೆಯಲ್ಲಿನ ದನ, ಎತ್ತು,ಹಸು, ಕರುಗಳಿಗೆ ಸ್ನಾನ ಮಾಡಿಸಿ ಬಣ್ಣಗಳಿಂದ ಅಲಂಕಾರ ಮಾಡಿ ಸಿಹಿ ತಿನಿಸುತ್ತಾರೆ, ರಾತ್ರಿ ಕಿಚ್ಚು ಹಾಯಿಸಲಾಗುತ್ತದೆ. ಕಿಚಾಯಿಸುವುದು ಎಂದರೆ ಎತ್ತರವಾಗಿ ಬೆಂಕಿ ಹಾಕಿ ಅಲಂಕಾರವನ್ನು ಪಶುಗಳನ್ನು ಬೆಂಕಿಯ ಮೇಲೆ ಹಾರಿಸಲಾಗುತ್ತದೆ. ಇದು ಹಬ್ಬದ ಸಂಪ್ರದಾಯವಾದರೂ ಇದಕ್ಕೆ ವೈಜ್ಞಾನಿಕವಾಗಿ ದನಗಳಲ್ಲಿರುವ ಕಿಟ್ಟ ಉಣ್ಣಿ ಅಂತಹ ಹುಳಗಳು ಸಾಯಲಿ ಎಂದು ಇದನ್ನು ಮಾಡಲಾಗುತ್ತದೆ.ಇದು ಹಬ್ಬದಲ್ಲಿ ಮನರಂಜನೆಯ ವಿಷಯವಾಗಿದೆ. ಸಂಕ್ರಾಂತಿ ಹಬ್ಬದಲಿ ಮನೆಯಲ್ಲಿ ಎಳ್ಳು ಬೀರು ತಯಾರಿಸಲಾಗುತ್ತದೆ ಎಳ್ಳು, ಬೆಲ್ಲ,ಕಡಲೆಬೀಜ, ಕಬ್ಬು, ಹುರಿಗಡಲೆ, ಕೊಬ್ಬರಿ, ಜೀರಿಗೆ ಪೆಪ್ಪರ್ಮೆಂಟ್ ಇತರ ತಿನಿಸುಗಳನ್ನು ಹಾಕಿ ಮಿಶ್ರಣ ಮಾಡಿ ಮನೆಯ ಹೆಣ್ಣು ಮಕ್ಕಳ ಕೈಯಲ್ಲಿ ಸಂಬಂಧಿಕರು ಹಾಗೂ ನೆರೆಯ ಮನೆಯವರಿಗೆ ನೀಡಲಾಗುತ್ತದೆ. ಇದನ್ನು ಎಳ್ಳು ಬೀರುವುದು ಎಂದು ಕರೆಯುತ್ತಾರೆ. ಹೆಣ್ಣುಮಕ್ಕಳಿಗೆ ಇದು ಸಡಗರದ ವಿಷಯ. ಎಳ್ಳು ಬೀರುವುದು ಒಂದು ಸಂಪ್ರದಾಯವಾದರೂ ವೈಜ್ಞಾನಿಕವಾಗಿ ಈ ಸಮಯದಲ್ಲಿ ಚಳಿಯಿಂದ ಚರ್ಮ ಒಣಗಿರುತ್ತದೆ. ಎಣ್ಣೆ ಅಂಶ ಕಡಿಮೆಯಾಗಿರುತ್ತದೆ ಆದ ಕಾರಣ ಹಬ್ಬದ ಈ ಎಲ್ಲ ಪದಾರ್ಥಗಳನ್ನು ತಿಂದರೆ ದೇಹಕ್ಕೆ ಒಳ್ಳೆಯದೆಂಬುದು ಹೇಳಿಕೆ. ಸಂಕ್ರಾಂತಿ ಸಮಯದಲ್ಲಿ ರೈತರು ಬೆಳೆದ ಬೆಳೆಯನ್ನು ಕಟಾವು ಮಾಡಿ ರಾಶಿ ಹಾಕುತ್ತಾರೆ. ಹಬ್ಬದ ದಿನದಂದು ಎಲ್ಲಾ ಫಸಲಿಗೆ ಪೂಜಿಸಿ ಮೊದಲ ಬೆಳೆಯಿಂದ ಅಡುಗೆ ಮಾಡಿ ಬಡಿಸುವ ಆಚಾರ ಸಂಕ್ರಾಂತಿ ಹಬ್ಬದ ವಿಶೇಷತೆಯನ್ನು ಹೆಚ್ಚಿಸುತ್ತದೆ. ಹಾಗಾಗಿ ಸಂಕ್ರಾಂತಿಯನ್ನು ಸಿರಿಧಾನ್ಯಗಳ ಹಬ್ಬವೆಂದು ಸಹ ಕರೆಯುತ್ತಾರೆ. ಸಂಕ್ರಾಂತಿ ಹಬ್ಬ ಕೇವಲ ಆಚರಣೆ ಆಗಿರದೆ ಹಲವು ವೈಜ್ಞಾನಿಕ ವಿಷಯಗಳನ್ನು ಒಳಗೊಂಡಿದೆ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಕರೆಯಲ್ಪಡುವ ಈ ಹಬ್ಬ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರಿನಿಂದ ಆಚರಿಸಲಾಗುತ್ತದೆ. ಪಂಜಾಬ್ ನಲ್ಲಿ ಮಾಘಿ, ಗುಜರಾತ್ ನಲ್ಲಿ ಉತ್ತರಾಯಣ ಎಂದು ಕರೆಯುತ್ತಾರೆ. ಸಂಕ್ರಾಂತಿ ಹಬ್ಬದಂದು ಗಾಳಿಪಟ ಹಾರಿಸುವುದು ಗಾಳಿಪಟ ಸ್ಪರ್ಧೆ ಏರ್ಪಡಿಸುವುದು ಗುಜರಾತ್ ನ ವಿಶೇಷ. ಸಂಕ್ರಾಂತಿಯನ್ನು ತಮಿಳುನಾಡಿನಲ್ಲಿ ಪೊಂಗಲ್ ಎಂಬ ಹೆಸರಿನಿಂದ ಆಚರಿಸಲಾಗುತ್ತದೆ.

mangala
0
@mangala
More From mangala
Comments ()
0
Most Liked
  • Most Liked
  • Most Recent
Delete This Reply?
This actions cannot be undone.
Delete This Comment?
This actions cannot be undone.
msg placeholder
msg placeholder